ಮ್ಯಾಕ್ ಬುಕ್ ಮತ್ತು ವಿನ್ಡೋಸ್ ಲ್ಯಾಪ್ ಟಾಪ್ ನಲ್ಲಿ ಎಲ್ಲ ಆಪ್ ಗಳಲ್ಲಿ ಕನ್ನಡ ಟೈಪ್ ಮಾಡುವುದು ಹೇಗೆ ?? How to type kannada on any app in Mac OS and Windows laptops
ಮ್ಯಾಕ್ ಬುಕ್ ನಲ್ಲಿ ಕನ್ನಡ ದಲ್ಲಿ ಟೈಪ್ ಮಾಡಲು ಲಿಪಿಕ ಎನ್ನುವ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ .pkg ಫೈಲ್ ಅನ್ನು ಡೌನ್ ಲೋಡ್ ಮಾಡಿ ಅದನ್ನು ಇನ್ಸ್ತಾಲ್ ಮಾಡಿಕೊಳ್ಳಿ. ಇನ್ಸ್ತಾಲ್ ಮಾಡಿದ ಮೇಲೆ ಅಪ್ಪ್ ಅನ್ನು ಒಪೆನ್ ಮಾಡಿ.
ಟಾಸ್ಕ್ ಬಾರ್ ನಲ್ಲಿ 'A' ಎನ್ನುವ ಐಕಾನ್ ಅನ್ನು ಕ್ಲಿಕ್ ಮಾಡಿ. ಲಿಪಿಕಾ ಐಮ್ಈ ಅನ್ನು ಕ್ಲಿಕ್ ಮಾಡಿ. ಕನ್ನಡ ಭಾಷೆಯನ್ನು ಆಯ್ಕೆ ಮಾಡಿ.
ಕೇವಲ ಕ್ರೊಮ್ ವೆಬ್ ಬ್ರೌಸರ್ ನಲ್ಲಿ ನಿಮಗೆ ಕನ್ನಡ ಟೈಪ್ ಮಾಡಬೇಕಾದಲ್ಲಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
ಗೂಗಲ್ ಇನ್ಪುಟ್ ಮೆಥಡ್ (Google Input Method)
ಗೂಗಲ್ ಕ್ರೊಮ್ ಎಕ್ಸ್ ಟೆನ್ಷನ್ ಅನ್ನು ಇನ್ಸ್ತಾಲ್ ಮಾಡಿಕೊಳ್ಳಿ. ಅದನ್ನು ಒಪೆನ್ ಮಾಡಿ ಕನ್ನಡ ಭಾಷೆ ಯನ್ನು ಆಡ್ ಮಾಡಿಕೊಳ್ಳಿ.
ವೆಬ್ ಬ್ರೌಸರ್ ನಲ್ಲಿ ನಿಮಗೆ ಕನ್ನಡ ಟೈಪ್ ಮಾಡಬೇಕಾದಲ್ಲಿ ಈ ನೀಲಿ ಕೀ ಬೋರ್ಡ್ ಐಕಾನ್ ಅನ್ನು ಬುಕ್ಮಾರ್ಕ್ ಬಾರ್ ನಲ್ಲಿ ಕ್ಲಿಕ್ ಮಾಡಿ ಕನ್ನಡ ಫೊನೆಟಿಕ್ ಆಪ್ಷನ್ ಅನ್ನು ಆಯ್ಕೆ ಮಾಡಿ.
ಮೈಕ್ರೊಸಾಫ್ಟ್ ವಿನ್ಡೋಸ್ ನಲ್ಲಿ ಯಾವ ಆಪ್ ನಲ್ಲಿ ಬೇಕಾದರೂ ಕನ್ನಡ ಟೈಪ್ ಮಾಡಲು ನಿಮಗೆ ಎರಡು ಆಯ್ಕೆ ಇವೆ:
೧. ಫೊನೆಟಿಕ್ ಕನ್ನಡ ಟೈಪ್ ಮಾಡಲು ಬರಹ.ಕಾಮ್ ಇಂದ ಆಪ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ತಾಲ್ ಮಾಡಿಕೊಳ್ಳಿ.
(ಇದಕ್ಕೆ ಶುಲ್ಕವನ್ನು ಪಾವತಿಸಬೆಕಾಗುವುದು.)
೨. ನುಡಿ ಎನ್ನುವ ಸಾಫ್ಟ್ವೇರ್ ಅನ್ನು ಇನ್ಸ್ತಾಲ್ ಮಾಡಿಕೊಳ್ಳಿ.
ಇದು ಸಂಪೂರ್ಣ ಫ್ಹ್ರೀ ಆಪ್ ಅಗಿರುತ್ತದೆ. ಕನ್ನಡ ಗಣಕ ಪರಿಷತ್ ನವರು ಇದನ್ನು ತಯಾರು ಮಾಡಿದ್ಡಾರೆ.
ಮ್ಯಾಕ್ ಬುಕ್ ಅನ್ನು ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
Comments
Post a Comment